web analytics

Modi , modiya jaadu , mission 300 geluvina rahasya – ಮೋದಿ , ಮೋಡಿಯ ಜಾಡು , ಮಿಷನ್ 100 ಗೆಲುವಿನ ರಹಸ್ಯ

110.00

2010ರ ಹೊತ್ತಿಗೆ ರಾಷ್ಟ್ರರಾಜಕಾರಣದಲ್ಲಿ ಧೂಮಕೇತುವಿನಂತೆ ಮೋದಿ ಕಾಣಿಸಿಕೊಂಡಾಗ “ಇದು ಒಂದಷ್ಟು ದಿನ ಮಿಂಚಿ ಬೂದಿಯಾಗುವ ಉಲ್ಕೆ” ಎಂದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದವರು ಯೋಚಿಸಿದ್ದರೇನೋ. ಆದರೆ ಕೇವಲ ಕ್ಷಣಿಕ ಕಾಯವಾಗಿ ಮಿಂಚಿ ಬೂದಿಯಾಗಲು ಬಂದಿಲ್ಲ; ಇಲ್ಲೇ ನಿಮ್ಮೊಡನೆ ಇದ್ದು ಬೆಳೆಯಲು ಬಂದಿದ್ದೇನೆ ಎಂಬ ಸಂದೇಶವನ್ನು ಮೋದಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸ್ಪಷ್ಟವಾಗಿಯೇ ದಾಟಿಸಿದರು. ಮೋದಿ ಎಂಬ ಮ್ಯಾಜಿಕ್ ಈ ದೇಶವನ್ನು ಆವರಿಸಿಕೊಂಡ ಬಗೆ ವಿಚಿತ್ರ, ವಿಶಿಷ್ಟ. ಹೊರ ಪಕ್ಷದವರಿಗೆ ಹೋಗಲಿ, ಸ್ವತಃ ಭಾರತೀಯ ಜನತಾ ಪಕ್ಷದೊಳಗಿನವರಿಗೇ ಅದೊಂದು ಅರ್ಥವಾಗದ ಅಚ್ಚರಿ.

ಮೋದಿ ಮೋಡಿಯನ್ನು ಎನ್. ಶಶಿಧರ್ ಅವರ ಈ ಪುಸ್ತಕ ಪದರ ಪದರವಾಗಿ ಓದುಗನ ಮುಂದೆ ಬಿಚ್ಚಿಡುತ್ತದೆ. ಭಾಜಪಾ, ಸಂಘಪರಿವಾರ, ಮೋದಿ ಮತ್ತು ಅಮಿತ್ ಷಾ ಎಂಬ ನಾಲ್ಕು ಕೇಂದ್ರಸ್ಥಾನಗಳು ಹೇಗೆ ತಂತಮ್ಮ ಕಾರ್ಯಸಾಧಿಸಿದವು; ಹೇಗೆ ಅವರೆಲ್ಲರ ನಡುವಿನ ಸಮನ್ವಯ, ಸಾಮರಸ್ಯ, ಸಮಬದ್ಧತೆ ಅವರನ್ನು ಒಟ್ಟಾಗಿ ಗುರಿ ತಲುಪಿಸಿತು ಎಂಬುದನ್ನು ಈ ಕೃತಿ ಎಳೆ ಎಳೆಯಾಗಿ ಬಿಡಿಸಿಡುವ ಬಗೆ ಚೇತೋಹಾರಿಯಾಗಿದೆ. ಶಶಿಧರ್ ಅವರು ಒಟ್ಟಾರೆಯಾಗಿ ದೇಶದಲ್ಲಿ ಮೋದಿ ಅಲೆ ಎದ್ದ ಬಗೆಯನ್ನು ವಿಶ್ಲೇಷಿಸಿರುವುದರ ಜೊತೆಗೇ ತ್ರಿಪುರ, ಅಸ್ಸಾಂ, ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶಗಳಂಥ ರಾಜ್ಯವಾರು ಮಟ್ಟದಲ್ಲೂ ಮೋದಿ ಯಾವ ಬಗೆಯಲ್ಲಿ ಜನಮಾನಸವನ್ನೂ ಆಡಳಿತವನ್ನೂ ಆವರಿಸುತ್ತ ಬಂದರು ಎಂಬುದನ್ನು – ಆಯಾ ರಾಜ್ಯಗಳ ರಾಜಕೀಯೇತಿಹಾಸದ ಹಿನ್ನೆಲೆಯನ್ನೂ ವಿವರಿಸಿ – ವಿಶ್ಲೇಷಿಸಿರುವುದು ಅರ್ಥಪೂರ್ಣವಾಗಿದೆ.

ಇಷ್ಟು ದಿನ ಕಥೆ, ಕಾದಂಬರಿಗಳ ಸುತ್ತವೇ ತಿರುಗುತ್ತಿದ್ದ ಪುಸ್ತಕೋದ್ಯಮ ಈಗೊಂದು ಹೊರಳುದಾರಿಯಲ್ಲಿದೆ ಎನ್ನಬಹುದು. ರಾಜಕೀಯವನ್ನು ಸಮಚಿತ್ತದಿಂದ ಗಂಭೀರವಾಗಿ ವಿಶ್ಲೇಷಿಸುವ ಬರವಣಿಗೆಗೂ ಓದುಗರು ಹುಟ್ಟಿಕೊಂಡಿದ್ದಾರೆಂಬುದು ಗಮನಿಸಬೇಕಾದ ಸಂಗತಿ. ಶಶಿಧರ್ ಅವರ ಕೃತಿ, ಗಾತ್ರದಲ್ಲಿ ಪುಟ್ಟದಾದರೂ, ಕೊಡುವ ಹೊಳಹುಗಳ ದೃಷ್ಟಿಯಲ್ಲಿ “ರಾಜಕೀಯ ಸಾಹಿತ್ಯ”ದ ಪಟ್ಟಿಯಲ್ಲೊಂದು ಮಹತ್ವದ ಕೃತಿಯೆಂದೇ ಹೇಳಬಹುದು.

Add to Wishlist
Add to Wishlist

Description

Additional information

Author

Shashidhar N

Publisher

Samanvita Publications

Reviews

There are no reviews yet.

Be the first to review “Modi , modiya jaadu , mission 300 geluvina rahasya – ಮೋದಿ , ಮೋಡಿಯ ಜಾಡು , ಮಿಷನ್ 100 ಗೆಲುವಿನ ರಹಸ್ಯ”

Your email address will not be published. Required fields are marked *

Quick Navigation
×
×

Cart

[]
×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !