ಜಿಲೇಬಿ – Jilebi
₹100.00
“(ಪ್ರತಿಯೊಬ್ಬ ಮನುಷ್ಯನೂ) ಗಿಡವೊಂದನ್ನು ನೆಡಬೇಕು, ಮಗು ಹೊಂದಬೇಕು ಮತ್ತು ಪುಸ್ತಕವೊಂದು ಬರೆಯಬೇಕು. ಇವು ನಮ್ಮ ನಂತರವೂ ಇರುತ್ತವೆ, ನಮಗೆ ಅಮರತ್ವವನ್ನು ನೀಡುತ್ತವೆ”
ಹೀಗಂದದ್ದು ಕ್ಯೂಬನ್ ಕ್ರಾಂತಿಕಾರಿ ಮತ್ತು ಕವಿ ಜೋಸ್ ಮಾರ್ಟಿ. ಮೊದಲ ಬಾರಿಗೆ ಈ ಶುಭಾಷಿತ ಕೇಳಿದಾಗ “ಇದನ್ನು ನನ್ನ ಜೀವನಕ್ಕೆ ಹೇಗೆ ಅನ್ವಯಿಸಲಿ?’’ ಎಂದು ಯೋಚಿಸಿದೆ. ನಾನು ಈಗಾಗಲೇ ಎರಡು ವಿಷಯಗಳನ್ನು ಮಾಡಿ ಮುಗಿಸಿಯಾಗಿದೆ- ನನಗೆ ಮಗಳಿದ್ದಾಳೆ; ಮತ್ತು ನಾನು ಈಗಾಗಲೇ ನನ್ನ ಮೊದಲ ಪುಸ್ತಕ ಕಾಫಿ ಬ್ರೇಕ್ ಬರೆದಾಗಿದೆ, ಈಗ ಮತ್ತೊಂದು ಪುಸ್ತಕ ನಿಮ್ಮ ಕೈಯಲ್ಲಿದೆ. ಅದರ ಹೆಸರು ಜಿಲೇಬಿ. ಈ ಮೂಲಕ ನಾನು ಅರಿತುಕೊಂಡಿರುವುದೇನೆಂದರೆ, ಬರವಣಿಗೆ ಎನ್ನುವುದು ಅಂತಿಮವಲ್ಲ, ಪುಸ್ತಕ ಬರೆಯುವುದು ಒಂದು ನಿರಂತರ ಪ್ರಕ್ರಿಯೆ- ನಿಮಗೆ ವಯಸ್ಸಾದಂತೆ ನಿಮ್ಮ ಅನುಭವವೂ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಮೊದಲ ಪುಸ್ತಕಕ್ಕಿಂತ ಮುಂದಿನ ಪುಸ್ತಕವು ಇನ್ನಷ್ಟು ವಿಷಯ ವಿಸ್ತಾರ ಹೊಂದಿರುತ್ತದೆ, ನೀವು ಬರಹಗಾರರಾಗಿ ಹೆಚ್ಚು ಬೆಳವಣಿಗೆ ಹೊಂದಿರುವಿರಿ. ನಾನು ಪ್ರತಿ ತುಣುಕು ಬರೆದಂತೆಲ್ಲ ನಾನು ಅತ್ಯುತ್ತಮ ಬರಹಗಾರನಾಗುತ್ತಿದ್ದೇನೆ ಎಂದು ಭಾವಿಸುತ್ತೇನೆ, ಕಾಲ್ಪನಿಕವೋ ಅಥವಾ ಕಾಲ್ಪನಿಕವಲ್ಲದೋ; ಏಳು ವರ್ಷದ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ ನಾನು ಬರವಣಿಗೆಯಲ್ಲಿ ಹೆಚ್ಚು ಸುಧಾರಿಸಿದ್ದೇನೆ.
ಜಿಲೇಬಿ ಮಾಡುವ ಅಲ್ಲಲ್ಲ ಬರೆಯುವ ಸಂದರ್ಭದಲ್ಲಿ ಪ್ರೋತ್ಸಾಹ ನೀಡಿದ ಮತ್ತು ಪ್ರೋತ್ಸಾಹ ನೀಡದೆ ಇದ್ದ ನನ್ನೆಲ್ಲ ಸ್ನೇಹಿತರಿಗೆ, ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಈ ಪುಸ್ತಕದಲ್ಲಿರುವ ಲೇಖನಗಳಿಗೆ ಸಂಬಂಧಪಟ್ಟಂತೆ ನಾನು ವಿಶೇಷವಾಗಿ ಒಂದು ವಿಷಯ ತಿಳಿಸಲು ಬಯಸುತ್ತೇನೆ. ಅದೇನೆಂದರೆ, ಈ ಲೇಖನದಲ್ಲಿ ನಾನು ಅನುಭವ ಹಂಚಿಕೊಂಡಿದ್ದೇನೆ, ಎಲ್ಲೂ ಉಪದೇಶಿಸಲು ಹೋಗಿಲ್ಲ. ಉಪದೇಶ ನೀಡಲು ಸಾಕಷ್ಟು ಆಧ್ಯಾತ್ಮಿಕ ಗುರುಗಳು, ತತ್ವಜ್ಞಾನಿಗಳು ಇದ್ದಾರೆ. ಹೀಗಾಗಿ ನಾನು ತತ್ವಜ್ಞಾನಿಯಾಗಿ ಅಥವಾ ಆಧ್ಯಾತ್ಮಿಕ ಗುರುವಾಗಿ ಅವರ ಸ್ಥಾನ ಪ್ರವೇಶಿಸಲು ಬಯಸುವುದಿಲ್ಲ!!.”
“ಗಿಡ ನೆಡಿ, ಮಗು ಹೊಂದಿ, ಪುಸ್ತಕ ಬರೆಯಿರಿ” ಎಂಬ ಶುಭಾಷಿತದ ವಿಷಯಕ್ಕೆ ವಾಪಸ್ ಬರೋಣ. ಈ ವಿಚಾರವು ಹಲವು ಮುಖಗಳನ್ನು ಹೊಂದಿದೆ. – ನೀವು ತರಕಾರಿ ಬೆಳೆಯಬಹುದು ಅಥವಾ ಹೂವುಗಳನ್ನು ಬೆಳೆಯಬಹುದು, ಹುಟ್ಟಿದ ಮಗುವಿಗೆ ಸಹಾಯ ಮಾಡಬಹುದು ಅಥವಾ ಪ್ರಾಣಿಗಳ ಮರಿಗಳಿಗೆ ಸಹಾಯ ಮಾಡಬಹುದು, ಹಾಡು ಬರೆಯಬಹುದು ಅಥವಾ ರೆಕಾರ್ಡ್ ಮಾಡಬಹುದು, ಕಟ್ಟಡ ವಿನ್ಯಾಸ ಮಾಡಬಹುದು ಅಥವಾ ಪೇಂಟಿಂಗ್ ಮಾಡಬಹುದು, ಡ್ಯಾನ್ಸ್‍ಗೆ ಕೋರಿಯೊಗ್ರಫಿ ಮಾಡಬಹುದು. ಹೀಗಾಗಿ ನೀವು ಯಾವ ವಿಭಾಗದಲ್ಲಿ ಸಾಧನೆ ಮಾಡಲು ಬಯಸುವಿರೋ ಅದೇ ದಾರಿಯನ್ನು ಆಯ್ಕೆ ಮಾಡಿಕೊಳ್ಳಿರಿ, ಆದರೆ, ಮಾಡುವ ಕೆಲಸದಲ್ಲಿ ಆತ್ಮತೃಪ್ತಿ ಹೊಂದಿರಿ. ಮಾಡುವ ಕೆಲಸದಲ್ಲಿ ಆನಂದ ಹೊಂದಿ, “ಅಮರ’ ಆಗಿ. ಅಂದಹಾಗೆ, “ಗಿಡ ನೆಡುವುದು ಮತ್ತು ಪುಸ್ತಕ ಬರೆಯುವ” ಉದ್ದೇಶ ಕೇವಲ ಅಮರತ್ವ ಅಲ್ಲ. ನೀವು ಈ ರೀತಿ ಮಾಡುವುದರಿಂದ, ನೀವು ಮಾಡುವ ಚಟುವಟಿಕೆಗಳಿಂದ, ಮಾಡುವ ಉತ್ತಮ ಕೆಲಸಗಳಿಂದ, ಈ ಪ್ರಕ್ರಿಯೆಯು ನಿಮ್ಮನ್ನು ಸಂತೋಷವಾಗಿಸುತ್ತದೆ ಮತ್ತು ಸದಾ ಜೀವಂತವಾಗಿಡುತ್ತದೆ.
ನನ್ನ ಜಿಲೇಬಿ. ಪುಸ್ತಕವನ್ನು ಓದಿ ಖುಷಿಪಡುವಿರಿ ಎಂಬ ನಂಬಿಕೆ ನನ್ನದು.
ರಂಗರಾಜ್ ಚಕ್ರವರ್ತಿ
ಬೆಂಗಳೂರು ಮೂಲದ ರಂಗರಾಜ್ ಚಕ್ರವರ್ತಿಯವರು ಇಂಜಿನಿಯರಿಂಗ್ ಪದವಿದರಾಗಿದ್ದು ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದಿದ್ದು ಲೈಟಿಂಗ್ ಕಾನ್ಸುಲ್ಟಂಟಂಟ್ / ಬಿಸಿನೆಸ್ ನಲ್ಲಿ ತಮ್ಮನು ತೊಡಗಿಸಿಕೊಂಡಿದಾರೆ . ಬರವಣಿಗೆ ಇವರ ನೆಚ್ಚಿನ ಹವ್ಯಾಸವಾಗಿದ್ದು ತಮ್ಮ ವೃತ್ತಿಯ ಜೊತೆ ಜೊತೆಗೆ ಅವರ ಬರಿಯುವ ಪ್ರವೃತ್ತಿಯನ್ನು ಜಾಗೃತವಾಗಿ ಇಟ್ಟುಕೊಂಡಿರುವ ಇವರು ವೈದಿಕ ಪರಂಪರೆಯ ಜ್ಯೋತಿಷ ಶಾಸ್ತ್ರ ಮತ್ತು ಹಸ್ತಾಮುದ್ರಿಕಾ ಶಾಸ್ತ್ರವನ್ನು ಸಹ ಅಭ್ಯಸಿಸುತ್ತಾರೆ .
Description

Reviews
There are no reviews yet.