web analytics

ಸಾಸಿವೆ ತಂದವಳು – Saasive Tandavalu

150.00

೩ನೇ ಆವೃತ್ತಿಯಲ್ಲಿ ಬಂದಿರುವ, ಸಾಸಿವೆ ತಂದವಳುಕ್ಯಾನ್ಸರ್ ಜೊತೆಗೊಂದು ಸ್ಪೂರ್ತಿದಾಯಕ ಹೋರಾಟ  , ಭಾರತಿ ಬಿ ವಿ ಯವರ ಕೃತಿ.

ಪ್ರೊಫ್ ಯು ಆರ್ ಅನಂತಮೂರ್ತಿ ಬೆನ್ನುಡಿಯಲ್ಲಿ ಹೇಳುವಂತೆ ,

ಸಾಸಿವೆ ತಂದವಳು ಎನ್ನುವ ಶೀರ್ಷಿಕೆಯೇ ನಮ್ಮನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಯಾಕೆಂದರೆ, ಸಾವಿಲ್ಲದ ಮನೆಯಿಲ್ಲ ಎಂಬುದನ್ನು ತಿಳಿದು ಸಾಸಿವೆ ತರಲಾರದೆ ಹೋದವಳ ಕಥೆ ಇಲ್ಲಿ ಇನ್ನೊಂದು ಅರ್ಥವನ್ನೇ ಪಡೆಯುವಂತೆ ಬಳಕೆಯಾಗಿದೆ.  ಏಕಕಾಲದಲ್ಲಿ ಅಂತರಂಗದ ಅನಿಸಿಕೆಯ ಸತ್ಯಗಳನ್ನು ಬಹಿರಂಗದಲ್ಲಿ ಕೊಡಬೇಕಾದ ವಿವರಗಳನ್ನು ಒಟ್ಟಾಗಿ ಹಿಡಿದಿಡುವ ಗದ್ಯ ಇಲ್ಲಿ ಅಪೂರ್ವವಾದದ್ದು. ಈ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ಗದ್ಯ ಕೃತಿಗಳಲ್ಲಿ ಇದು ಒಂದು.

ತನ್ನ ಅಂತರಂಗದ ಅಸಹನೀಯವಾದ ಯಾತನೆಯ ಕಥೆಯನ್ನು ಜೊತೆಗೆ ಅದನ್ನು ಗೆದ್ದು ನಿಲ್ಲುವ ಜೀವನೋತ್ಸಾಹದ ದಿವ್ಯ ಕ್ಷಣಗಳನ್ನು ಒಟ್ಟಾಗಿ ಸೆರೆ ಹಿಡಿದಿರುವ ಈ ಬರವಣಿಗೆ ವಾಸ್ತವಿಕವೂ ಹೌದು, ಒಂದು ಕಥೆಯಂತೆ ಅಥವಾ ಕವಿತೆಯಂತೆ ಅಪಾರವಾದ ಕಾಲ್ಪನಿಕ ಶಕ್ತಿಯನ್ನು ಪಡೆದ ಸಾಹಿತ್ಯ ಕೃತಿಯು ಹೌದು.

ಈ ಕ್ಯಾನ್ಸರಿನಂತಹ ಒಂದು ಖಾಯಿಲೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಗೆಲುವು – ಸೋಲು ಎರಡು ಒಟ್ಟೊಟಿಗೇ ಎದುರಾಗುವ ಭರವಸೆಯು ಇದೆ, ಸಂಕಟವೂ ಇದೆ. ಇದನ್ನು ಬರೆಯುವಾಗ ಬರಹಗಾರ್ತಿಗೆ ಜೀವನದ ಪ್ರೀತಿ ಇರಬೇಕು. ಆದರೆ ಅದು ಅತ್ಯರತಿಯಾಗಕೂಡದು ಅಥವಾ ಅತ್ತ ಮರುಕದ ಉತ್ಕಟತೆಯಲ್ಲಿ ಸಾಯಬೇಕೆಂಬ ಅಪೇಕ್ಷೆಯು ಆಗಕೂಡದು.  ಭಾರತಿ ಇದನ್ನು ಅಪೂರ್ವವೆಂಬಂತೆ ಸಾಧಿಸಿದ್ದಾಳೆ.

ಈ ಕೃತಿ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕಾದಷ್ಟು ಮುಖ್ಯವೆಂದು ನನಗೆ ಅನ್ನಿಸಿದೆ. ಕ್ಯಾನ್ಸರ್ ರೋಗದಿಂದ ಬಳಲುವ ಯಾರಿಗಾದರೂ ಇದೊಂದು ನೈತಿಕ ಶಕ್ತಿಯನ್ನು ಜೊತೆಗೆ ಹೇಗೆ ಔಷದೋಪಚಾರಗಳನ್ನು ಪಡೆಯಬೇಕೆಂದು ಒಟ್ಟಾಗಿ ಕಲಿಸುವ ಪಾಠವಾಗಿದೆ. “

Add to Wishlist
Add to Wishlist

Description

Reviews

There are no reviews yet.

Be the first to review “ಸಾಸಿವೆ ತಂದವಳು – Saasive Tandavalu”

Your email address will not be published. Required fields are marked *

Quick Navigation
×
×

Cart

[]
×

ನಮಸ್ಕಾರ

Kannadapustaka.netಗೆ ಸ್ವಾಗತ , ನಿಮಗೆ ಯಾವ ಪುಸ್ತಕ ಬೇಕು ?  ?

× ಪುಸ್ತಕ ಬೇಕೇ ? ಇಲ್ಲಿ ಚಾಟ್ ಮಾಡಿ !